Total Pageviews

Thursday, February 17, 2011

ನನ್ನವಳ ಜೊತೆ ನನ್ನಲ್ಲೊಂದು ಮಧುರ ನೆನಪು

ಅದು ಸರಿಸುಮಾರು ಸಂಜೆ 6ರರ ಸಮಯ. ನಾನು ಮತ್ತು ನನ್ನವಳು ಎಂದಿನಂತೆ ಸಮುದ್ರದ ದಡದಲ್ಲಿ ವಿಹರಿಸಲು ಹೊರಟೆವು. ಇಂದು ಪ್ರೇಮಿಗಳ ದಿನ. ಪ್ರೇಮಿಗಳೆಲ್ಲರಿಗು ಈ ದಿನ ವಿಷೇಶವೇ. ಆದರೆ ನಮಗೇಕೊ ಎನೂ ವ್ಯತ್ಯಾಸ ಕಾಣಿಸಲಿಲ್ಲ. ಪ್ರೀತಿಸಿದವರಿಗೆ ಪ್ರತಿದಿವಸವು ಹೊಸದಿನ ಆಗಿರುವಾಗ ಪ್ರೇಮಿಗಳ ದಿನದಲ್ಲಿ ಎನೂ ವ್ಯತ್ಯಾಸ ಕಾಣಿಸದು. ನನಗೆ ಮತ್ತು ನನ್ನವಳಿಗೆ ಈ ಸತ್ಯ ತಿಳಿದಿದ್ದರಿಂದ ಯಾವ ಸಂಭ್ರಮದ ಅವಶ್ಯಕತೆಯೂ ಬರಲಿಲ್ಲ.

ಎಂದಿನಂತೆ ನಮ್ಮಿಬ್ಬರಲ್ಲಿ ಅದೇ ನೀರವ ಮೌನ. ಒಂದೂ ಮಾತಾಡದೆ ನಾವಿಬ್ಬರು ಆ ಸುಂದರ ಸಂಜೆಯನ್ನು ಅನುಭವಿಸುತ್ತಾ ಮುನ್ನಡೆದೆವು. ನಾನು ನನ್ನವಳನ್ನೆ ನೋಡುತ್ತಾ ಮುನ್ನಡೆದೆ. ಅವಳಲ್ಲಿನ, ಆ ಮೌನದಲ್ಲಿನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನವಷ್ಟೆ. ಅವಳಲ್ಲಿನ ಆ ಸುದೀರ್ಘ ಮೌನದಲ್ಲಿ ನನಗೆ ಹೊಸ ಹೊಸ ಅರ್ಥಗಳು ಕಾಣುತ್ತಿದ್ದವು. ನಾನು ನನ್ನವಳನ್ನು ನೋಡುವಾಗ ನನಗನಿಸಿದ್ದು ಅವಳ ಸಹನೆ ಎಲ್ಲವನ್ನು ಮೀರಿದ್ದೆಂದು. ಪ್ರತಿ ದಿನ ಎನಾದರೊಂದು ಕಾರಣಕ್ಕೆ ಜಗಳವಾಡುವ ನಾವು ಪರಸ್ಪರ ಪ್ರೀತಿಯಿಂದ ಬಾಳುತ್ತಿರುವ ಕಾರಣವೇ ಅವಳ ಸಹನೆ. ನಾನು ಸ್ವಲ್ಪ ಕೋಪಿಸ್ಟ ಆದರೆ ಯಾವ ಕಾರಣಕ್ಕೂ ನನ್ನ ಕೋಪದಲ್ಲಿ ಅವಳ ಸ್ನೇಹಿತರನ್ನು ಬೈದಿದಿಲ್ಲ. ಸಾಮಾನ್ಯವಾಗಿ ಯಾವ ಕಾರಣಕ್ಕಾಗಲಿ ಪ್ರೇಮಿಗಳಲ್ಲಿ ಜಗಳವಾದರೂ ಮದ್ಯ ಬೈಯ್ಯಲು ಸಿಗುವುದೇ ಅವನ/ಅವಳ ಸ್ನೇಹಿತರು. ಆದರೆ ನಮ್ಮಲ್ಲೆಂದೂ ಆ ರೀತಿ ನೆಡೆದದ್ದಿಲ್ಲ. ಯಾವುದೇ ಜಗಳವಾದರೂ ಜಗಳದ ವಿಶಯಕ್ಕೆ ಮಾತ್ರ ಸೀಮಿತ. ಕೆಲವೊಮ್ಮೆ ಜಗಳವಾಡುವಾಗ ಅವರ ತಂದೆ ತಾಯಿಯನ್ನು ಪ್ರೇಮಿಗಳು ಶಪಿಸುವುದುಂಟು. ಆದರೆ ನಮ್ಮಲ್ಲಿ ಅದೆಂದೂ ನಡೆದದ್ದಿಲ್ಲ. ಕೋಪ ಬಂದಾಗ ಅವಳು ನನ್ನನೇ ದಿಟ್ಟಿಸಿ ನೋಡುತ್ತಾಳೆ. ನನಗೆ ಅವಳ ಕೋಪ ಅರ್ಥವಾಗುತ್ತದೆ, ಸುಮ್ಮನಾಗುತ್ತೇನೆ. ಜಗಳ ಮಿತಿ ಮೀರಿದಾಗ ಇಬ್ಬರು ಕ್ಷಮೆ ಕೇಳುತ್ತೇವೆ. ತಪ್ಪು ಮಾಡಿದವರು ಮಾಡಿದ ತಪ್ಪಿಗಾಗಿ, ತಪ್ಪು ಮಾಡದವರು ಜಗಳವನ್ನು ಹೆಚ್ಚು ಮಾಡಿದ್ದಕ್ಕಾಗಿ. ಆ ಸಮಯದಲ್ಲಿ ತಪ್ಪು ಯಾರದ್ದೆಂದು ವಾದಿಸಲು ಹೊಗುವುದಿಲ್ಲ. ನಮ್ಮ ಪ್ರಕಾರ ತಪ್ಪುಗಳು ನಮಗೆ ತಿಳಿಯದೆ ನಡೆಯುವಂತಹದ್ದು. ತಿಳಿಯದೆ ಮಾಡಿದ ತಪ್ಪಿಗಾಗಿ ತಿಳಿದೂ ತಿಳಿದೂ ದೊಡ್ಡ ಜಗಳವಾಡಿ ಮತ್ತೊಂದು ತಪ್ಪು ಮಾಡುವುದಿಲ್ಲ. ಎಕೆಂದರೆ ಅವಳಿಗೆ ನಾನು, ನನಗೆ ಅವಳನ್ನು ಬಿಟ್ಟರೆ ಬೇರೆ ಯಾರು ಇಲ್ಲ. ನಮಗೆ ನಾವೆ ಸಮಾದಾನ ಮಾಡಿಕೊಂಡು ಸುಮ್ಮನಾಗುತ್ತೇವೆ.

ಅವಳಲ್ಲಿನ ಧೈರ್ಯ ನನಗೆ ಇಷ್ಟವಾದದ್ದು. ನಾವು ಪ್ರೀರಿಸುದಕ್ಕೆ ಪ್ರಾರಂಭ ಮಾಡಿದ್ದು ನಮ್ಮ ಕಡೆಯ ವರ್ಷದ ವಿಧ್ಯಾಬ್ಯಾಸದಿಂದ. ಅವಳು ನನಗೆ ಮೊದಲು ತನ್ನ ಪ್ರೀತಿಯನ್ನು ನಿವೇದಿಸಿದಳು. ಅದು ಪ್ರೇಮಿಗಳ ದಿನದಂದೇ. ನಾನು ಅವಳಿಗೆ ಮೊದಲು ಕೇಳಿದ್ದು "ಯಾವ ಧೈರ್ಯದ ಮೇಲೆ ನನ್ನನ್ನು ಪ್ರೀತಿಸುತ್ತಿ" ಅಂತ. ಅವಳು ಹೇಳಿದ್ದು ಇಷ್ಟೇ "ನಂಬಿಕೆ". ನಾನು ಪುನಃ ಕೇಳಿದೆ "ಆ ನಂಬಿಕೆ ಹುಸಿಯಾಗಿದ್ದರೆ". ಅವಳೆಂದಳು "ನನ್ನ ನಂಬಿಕೆ ಹುಸಿಯಾಗಲು ಸಧ್ಯವಿಲ್ಲ. ನಂಬಿಕೆ ಹುಸಿಯಾದರೆ ಅದು ನನ್ನ ಭ್ರಮೆ". ಹೇಗೆಂದು ನಾನು ಕೇಳಿದೆ. "ನಂಬಿಕೆ ಹುಸಿಯಾದರೆ, ಇಲ್ಲಿಯವರೆಗು ನಾನು ಭ್ರಮೆಯಲ್ಲಿದ್ದೆ ಎಂದಾಗುತ್ತದೆ" ಎಂದಳು. ತಕ್ಷಣಕ್ಕೆ ನನಗೆ ಒಪ್ಪಿಕೊಳ್ಳು ಮನಸ್ಸಿದ್ದರು ನಾನು ಅವಳ ಪ್ರೀತಿಯನ್ನು ಒಪ್ಪಲ್ಲಿಲ್ಲ. ನಾನವಳಿಗೆ "ನಾನು ಇನ್ನು 2 ವರ್ಷ ನಿನ್ನನ್ನು ಮಾತನಾಡಿಸುವುದಿಲ್ಲ. 2 ವರ್ಷದ ನಂತರ ಮೂದಲು ನಾನೇ ನೀನ್ನ ಬಳಿ ಬಂದರೆ ನಿನ್ನ ನಂಬಿಕೆ ನಿಜವಾದದ್ದು. ನೀನೇ ನನ್ನ ಬಳಿ ಬಂದರೆ ನನ್ನ ನಂಬಿಕೆ ನಿಜವಾದದ್ದು, ಇಲ್ಲದಿದ್ದರೆ ಇಬ್ಬರ ನಂಬಿಕೆ ಹುಸಿಯಾದದ್ದು" ಎಂದಷ್ಟೇ ಹೇಳಿದೆ. ಮತ್ತೆ ನಾವಿಬ್ಬರು 2 ವರ್ಷದ ತನಕ ಮಾತನಾಡಿದ್ದೇ ಇಲ್ಲ. ಅಲ್ಲಿ ಇಲ್ಲಿ ನೋಡಿದಾಗ ಕಿರುನಗೆ ಬೀರುತ್ತಾ ಅಪರಿಚಿತರಂತೆ ನಡೆದುಕೊಳ್ಳುತ್ತಿದ್ದೆವು.

2 ವರ್ಷದ ನಂತರ ಅವಳು ನನಗೆ ಕರೆ ಮಾಡಿ "ನೆನಪಿದ್ದಿನಾ" ಎಂದಷ್ಟೇ ಕೇಳಿದಳು. ನಾನು "ಯಾರು" ಎಂದೆ. ಅದಕ್ಕೆ "ದಿನಾ ನಿನ್ನನ್ನು ನೆನಪಿಸಿಕೊಳ್ಳುವವಳು" ಅಂದಳು. ನಾನು "ನಾನು ದಿನಾ ನೆನಪಿಸಿಕೊಳ್ಳುವವಳು ತಾನೆ" ಎಂದೆ. ಅವಳು "ಹೌದು" ಎಂದಳು. ನನಗೂ ಮತ್ತು ಅವಳಿಗೂ ತಿಳಿದಿತ್ತು ನಾವು ಒಬ್ಬರನ್ನೋಬ್ಬರು ಮರೆಯಲು ಸಾಧ್ಯವಿಲ್ಲವೆಂದು. ನಾನು ಅವಳನ್ನು ಕಾಯಿಸಿದ್ದು ನಾನು ಬದುಕಿನಲ್ಲಿ ನೆಲೆಯನ್ನು ಕಂಡುಕೊಳ್ಳಲು. ಅದನ್ನು ಅವಳೂ ಉಹಿಸಿದ್ದಳು. ಪ್ರೇಮಿಗಳಲ್ಲಿ ಬೇಕಾಗಿರುವುದು ಇಂತಹ ಹೊಂದಾಣಿಕೆಗಳೆ ತಾನೆ. ಕೊನೆಗೆ ಇಬ್ಬರು ನಾವಾಗಿಯೆ ನಮ್ಮ ನಮ್ಮ ತಂದೆ ತಾಯಿಯ ಮನೆಯಲ್ಲಿ ವಿಶಯ ತಿಳಿಸಿದೆವು. ಮನೆಯಲ್ಲಿ ಎಲ್ಲರು ಒಪ್ಪಿದರು. ಕಾರಣ, ನಾವಾಗಿಯೇ ನಮ್ಮ ಮನೆಯಲ್ಲಿ ವಿಶಯವನ್ನು ತಿಳಿಸಿದ್ದಕ್ಕಾಗಿ. ಈಗಲೂ ಕೆಲವರು ತಂದೆ ತಾಯಿ ಬೇಸರ ಮಾಡಿಕೊಳ್ಳುವವರೆಂದು ಪ್ರೀತಿಯ ವಿಶಯವನ್ನು ಮುಚ್ಚಿಡುತ್ತಾರೆ. ಮುಂದೆ ಅವರಿಗೆ ವಿಶಯ ಗೊತ್ತಾಗಿ ಬೈಯ್ಯಿಸಿ ಕೊಳ್ಳುತ್ತಾರೆ. ತಂದೆ ತಾಯಿಗಳು ಬೈಯ್ಯುವುದು ನಮ್ಮ ಮಗ/ಮಗಳು ವಿಶಯವನ್ನು ಹೇಳದೆ ಬೇರೆಯವರಿಂದ ತಿಳಿಯಿತಲ್ಲ ಎಂಬ ಕಾರಣಕ್ಕೆ. ನಮ್ಮ ವಿಶಯದಲ್ಲಿ ಹಾಗಾಗಲಿಲ್ಲ.

ನಾವಿಬ್ಬರು ಒಂದೇ ರೀತಿ ಯೋಚನೆ ಮಾಡೂತ್ತೇವೆ. ನಾನು ಕಳೆದ ವರ್ಷ ಪ್ರೇಮಿಗಳ ದಿನದಂದು ಅವಳಿಗೊಂದು ಉಡುಗೊರೆ ಕೊಟ್ಟೆ. ಬಹಳಷ್ಟು ದಿನ ಅದನ್ನು ಅವಳು ತೆರೆದು ನೊಡಿರಲಿಲ್ಲ. ಒಂದು ದಿನ ನಾವಿಬ್ಬರೇ ಇದ್ದಾಗ ಉಡುಗೊರೆ ತೆರೆದು "ಪ್ರತೀ ಕ್ಷಣ ನಿನ್ನ ಪ್ರೀತಿ ಅರ್ಥವಾಗುವಾಗ ಅದನ್ನು ಉಡುಗೊರೆಯ ರೂಪದಲ್ಲಿ ವ್ಯಕ್ತಪಡಿಸುವ ಅವಸರವೇನಿತ್ತು" ಎಂದಳು. ಅದೇ ಕೊನೆಯ ಉಡುಗೊರೆ ನಾನವಳಿಗೆ ಕೊಟ್ಟದ್ದು. ನಂತರ ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬಂದಾಗ ನಾವಿಬ್ಬರು ಪರಸ್ಪರ ಉಡುಗೊರೆ ವಿನಿಮಯ ಮಾಡಲಿಲ್ಲ, ಶುಭಾಶಯ ಹೇಳಿಕೊಳ್ಳಲಿಲ್ಲ. ಈ ಬಾರಿ ಅವಳೊಂದು ದಿನ ನನ್ನನ್ನು ಕರೆದು ಪ್ರೇಮಿಗಳ ದಿನದಂದು ಶುಭಾಶಯ ಹೇಳದಿದ್ದಕ್ಕೆ ತಪ್ಪಾಯ್ತಾ ಎಂದಳು. ನಾನು "ಇಲ್ಲ" ಎಂದೆ. "ನಿಜವಾಗಿ" ಎಂದಳು. ನಾನು "ಪ್ರೀತಿಸಿದವರಿಗೆ ನಿತ್ಯವೂ ಪ್ರೇಮಿಗಳ ದಿನವೇ. ಅದನ್ನು ವರ್ಷಕ್ಕೊಂದು ಬಾರಿ ಆಚರಿಸಿಕೊಂಡು ಸಂಭ್ರಮ ಪಡುವ ಅವಶ್ಯಕತೆಯಿಲ್ಲ" ಎಂದೆ. ಒಪ್ಪಿಕೊಂಡಳು. ಅಂದಿನಿಂದ ಪ್ರತಿದಿನವೂ ನಮಗೆ ಹೊಸದೇ.

ಪ್ರೀತಿಸಿದವನಿಂದ ಪ್ರೀತಿಸಿದವಳಿಗೆ, ಪ್ರೀತಿಸಿದವಳಿಂದ ಪ್ರೀತಿಸಿದವನಿಗೆ ಇದಕ್ಕಿಂತ ಇನ್ನೇನು ಬೇಕು?

No comments:

Post a Comment