Total Pageviews

Monday, February 28, 2011

ಬದುಕೊಕ್ಕೆ ಬರದ ಬಡಜನರು


ತುಳಿಯೋರ ಮುಂದೆ ಬಾಗೊರು

ಹಸಿದೊರ ಮುಂದೆ ಬೇಡೋರು
ಮರ್ಯದೆಗಂಜಿ ಬದುಕೋರು
ಬದುಕೊಕ್ಕೆ ಬರದ ನಾವ್ ಬಡಜನರು

ಎರೆಡೊತ್ತು ಉಂಡು ಮಲಗೋರು
ಅಲೆಮಾರಿಯಂತೆ ತಿರುಗೋರು
ಹಸಿವನ್ನೆ ಹೆತ್ತು ಹೊತ್ತೋರು
ಬದುಕೊಕ್ಕೆ ಬರದ ನಾವ್ ಬಡಜನರು

ಕನಸಲ್ಲೇ ಜೀವನ ಕಾಣೋರು
ಎಚ್ಚೆತ್ತು ನಿಲ್ಲದೆ ಮಲಗೋರು
ಕಿಚ್ಚೆದ್ದು ಸಿಡಿಯದೆ ಮುಲುಗೋರು
ಬದುಕೊಕ್ಕೆ ಬರದ ನಾವ್ ಬಡಜನರು

ಕಂಡೂ ಕಾಣಾದ ಕುರುಡರು
ಹೆದರಿ ಹೆದರಿ ಸಾಯೋರು
ಗೆಲ್ಲೊ ಆಸೆಯ ಮರೆತೋರು
ಬದುಕೊಕ್ಕು ಬರದ ನಾವ್ ಬಡಜನರು

No comments:

Post a Comment